top of page

ನಮ್ಮ ಮಾರುಕಟ್ಟೆ ಬಗ್ಗೆ

ನಾನು ಜಗದೀಶ್ ಭಟ್ ನನ್ನ ಬಗ್ಗೆ ಮತ್ತು "ವಾಸುಕಿ ಹೋಮ್ ಪ್ರೊಡಕ್ನ್ " ಬಗ್ಗೆ ಸಂಕ್ಷಿಪ್ತ ವಾಗಿ ಪರಿಚಯಿಸಲು ಬಯಸುತ್ತೇನೆ
9 ನೇ ಅಕ್ಟೋಬರ್ 2007 ರಂದು ನನ್ನ ಪೋಷಕರ ಆಶೀರ್ವಾದದೊಂದಿಗೆ ನಮ್ಮ ಪೂರ್ವಜರ ಮನೆ "ವಾಸುಕಿ ನಿಲಯ" ದಲ್ಲಿ 
ರಸಂ ಪೌಡರ್ ಮತ್ತು ಸಾಂಬಾರ್ ಪೌಡರನ್ನು ಪೋಷಕರ ಕೋರಿಕೆಯನ್ನು ಪೂರೈಸಲು ಬೃಹತ್ ಪ್ರಮಾಣದಲ್ಲಿ ತಯಾರಿಸಲಾಯಿತು
ನಾನು ನನ್ನ ಜೀವನದಲ್ಲಿ ಯಾವ ಕೆಲಸವನ್ನೂ  ಮಾಡಿದರು ಅದು ಪ್ರಯೋಜನಕ್ಕೆ ನನ್ನ ಜೀವನದಲ್ಲಿ ಬರಲಿಲ್ಲ ಅದಕ್ಕೆ ನನ್ನ ತಾಯಿಯವರು ತಂದೆಯ ವೃತ್ತಿಯನ್ನು ಮಾಡು ಅಂತ ಸೂಚಿಸಿದರು ತಂದೆ ದೊಡ್ಡ ಅಡುಗೆಯವರು ಮತ್ತು ಜ್ಯೋತಿಷ್ಯರು ಆಗಿದ್ದರು 56ನೇ ವರ್ಷಕ್ಕೆ ಅಡುಗೆಯನ್ನು ಬಿಟ್ಟು ಜ್ಯೋತಿಷ್ಯ ಹೇಳ ತೊಡಗಿದರು ಆದರೂ ಅಡುಗೆಯ ಅಭಿಮಾನಿಗಳು ತಂದೆಯ ಕೈಯಿಂದ ಸಾಂಪ್ರದಾಯಿಕವಾಗಿ ತಯಾರಿಸಿದ ಸಾರಿನ ಹಾಗೂ ಸಾಂಬಾರು ಪುಡಿಯನ್ನು ತಯಾರಿಸಿ ದೂರ ದೂರದ ಊರಿಗೆ ತೆಗೆದುಕೊಂಡು ಹೋಗುತ್ತಿದ್ದರು ತಂದೆಗೆ ಇದನ್ನು ತಯಾರಿಸಿಕೊಡಲು ಕಷ್ಟವಾಗುತ್ತಿತ್ತು ಏಕೆಂದರೆ ಜ್ಯೋತಿಷ್ಯ ಕೇಳಲು ತುಂಬಾ ಜನರು ಬರುತ್ತಿರುವ ವೇಳೆ ಅಮ್ಮ ಸಾರಿನ ಮತ್ತು ಸಾಂಬಾರಿನ ಹುಡಿಯನ್ನು ಸಾಂಪ್ರದಾಯಕವಾಗಿ ತಯಾರಿಸಲು ಹೇಳಿಕೊಟ್ಟರು ಮತ್ತು ಮನೆಯಲ್ಲಿಯೇ ತಯಾರಿಸಲು ಅವಕಾಶ ಕೊಟ್ಟರು 

ಮನೆಯವರ ಎಲ್ಲರ ಸಹಕಾರದಿಂದ 2007 ರಿಂದ 2013 ರ ತನಕ ಮನೆಯಲ್ಲಿ ಸಾರಿನ ಮತ್ತು ಸಾಂಬಾರು ಪುಡಿ ತಯಾರಿಸಿದೆ ಮತ್ತು ಬೃಹತ್ ಪ್ರಮಾಣದಲ್ಲಿ ಜನರು ಮನೆಗೆ ಬಂದು ಕೊಂಡು ಹೋಗುತ್ತಿದ್ದರು ಯಾವುದೇ ಕೃತಕ ಬಣ್ಣಗಳನ್ನು ಅಥವಾ ರಾಸಾಯನಿಕ ವಸ್ತುಗಳನ್ನು ಸೇರಿಸುವುದಿಲ್ಲ ಆದ್ದರಿಂದ ಇದು ವ್ಯಾಪಾರ ಕವಾಗಿ ಜನಪ್ರೀತಿಗೆ ಕಾರಣವಾಯಿತು ಹೀಗಾಗಿ ಬಾಯಿಯ ಮಾತಿನಿಂದ ಜನರಿಂದ ಜನರಿಗೆ ತಿಳಿದು ಹೆಚ್ಚು ಬೇಡಿಕೆಯನ್ನು ಸೃಷ್ಟಿಸಿತು ಅದು ವಾಸುಕಿ ಹೋಂ ಪ್ರಾಡಕ್ಟ್ ಎಂದು ಬ್ರಾಂಡ್ ಆಯಿತು
ಜನರ ಬೇಡಿಕೆಯನ್ನು ಪೂರೈಸಲು 2013 ರ ನಂತರ ನನ್ನ ಮನೆಯ ಹತ್ತಿರ ವಾಸುಕಿ ಹೋಂ ಪ್ರಾಡಕ್ಟ್ ಎಂಬ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಯಿತು ಅಲ್ಲಿ ನಾನು ನನ್ನ ಹೆಂಡತಿಯೊಂದಿಗೆ ಸಾರಿನ ಮತ್ತು ಸಾಂಬಾರು ಹುಡಿಯ ಜೊತೆಗೆ ಉಪ್ಪಿನ ಕಾಯಿಯನ್ನು ತಯಾರಿಸಲು ಪ್ರಾರಂಭಿಸಿದೆ ಇತ್ತೀಚಿಗೆ ತಂದೆ-ತಾಯಿಯ ನಿಧನದ ನಂತರ ನನ್ನ ವೃದ್ಧಾಪ್ಯದ ಕಾರಣ ಆನ್ಲೈನ್ ಇ-ಕಾಮರ್ಸ್ ಫ್ಲಾಟ್ ಫಾರ್ಮಿಗೆ ಮುನ್ನುಗ್ಗುವ ಮೂಲಕ ಅವರ ಪರಂಪರೆಯನ್ನು ಮುಂದುವರಿಸಲು ಇದು ಹೆಚ್ಚು ಸ್ಮರಣೀಯವಾಗಿದೆ ಅನೇಕ ಗ್ರಾಹಕರಿಗೆ ಅಧಿಕೃತ ಸಾಂಪ್ರದಾಯಿಕ ರುಚಿಯನ್ನು ವ್ಯಾಪಕವಾಗಿ ವೆಬ್ ಸೈಟಿನ ಮೂಲಕ ತಲುಪಿಸಲು ವಾಸುಕಿ ಹೋಂ ಪ್ರಾಡಕ್ಟ್ಸ್ ಕಂಪೆನಿ ಉತ್ಯುಕತೆಯಿಂದ ಎದುರು ನೋಡುತ್ತಿದೆ ಆನುವಂಶಿಕ ಜ್ಞಾನ ಮತ್ತು ಹಳೆಯ ಸಾಂಪ್ರದಾಯಿಕ ಆಚರಣೆಗಳನ್ನು ನಿವಾರಿಸುವ ಮೂಲಕ ಅಧಿಕ ರುಚಿಯನ್ನು ಒದಗಿಸುತ್ತೇವೆ

bottom of page